ದುಡಿಯುವ ಬಗೆ ತಿಳಿಯದ ನಾ
ನಿದಿರೆಯಲ್ಲಿ ಮುಳುಗಿದ್ದೆ.
ಒಮ್ಮೆ ಹಾಗೇ ಸುಮ್ಮನೆ
ಒಂದು ಕನಸುಬಿತ್ತು
ಅಲ್ಲಿ ಜಗದ ಶ್ರೇಷ್ಠ ಕವನಗಳೆಲ್ಲ
ಮೂಡಿ ಬಂತು....
ನಾ ಅವನ್ನೆಲ್ಲ ಲೇಖನಿಯ ಮೂಲಕ
ಕಾಗದಕ್ಕಿಳಿಸಿದೆ
ದಿನವೂ ಮೂಡಿದ ಕನಸುಗಳು
ಹೊಸ ಹೊಸ ಕವನಗಳನ್ನು ಹೊತ್ತು ತಂದವು ,
ನಾ ಪ್ರಸಿದ್ಧನಾಗುತ್ತ ಹೋದೆ
ಈಗ ಅಭಿಮಾನಿಗಳ ಪತ್ರಕ್ಕೆ ಉತ್ತರಿಸಿ ಉತ್ತರಿಸಿ
ಸುಸ್ತಾಗಿ ಬರುವ ನಿದಿರೆಯಲ್ಲಿ
ಕನಸುಗಳಿಲ್ಲ
ಆ ಚಿಂತೆಯಲ್ಲಿ ಈಗೀಗ ನಿದ್ದೆಯೂ
ಹತ್ತಿರ ಸುಳಿಯುವುದಿಲ್ಲ!!
Subscribe to:
Post Comments (Atom)
No comments:
Post a Comment